Not a member of Pastebin yet?
Sign Up,
it unlocks many cool features!
- 'ಟೈಮ್ ಆಗೋಯ್ತು, ನಾಳೆ ಬೆಳಗ್ಗೆ ಬನ್ರೀ' ಕಿರುಚ್ತಾ ಇದ್ದ ಬಾಗಿಲಲ್ಲಿ ಕೂತಿದ್ದ ಸೆಕ್ಯುರಿಟಿ. 'ಅಣ್ಣಾ , ಮಗ ಒಂದೇ ಅವಳೆ ಮೊದಲ್ನೇ ಎರಿಗೆ ಬ್ಯಾರೆ, ಶಾನೆ ಬೇನೆ ..ಕಾಪಿ ತರಕ್ಕೆ ಈ ಡಬ್ಬಿ ತೊಗೊಂಡು ಹೋಗಿದ್ದೆ ಕನನ್ನೋ...' ಒಳಗೆ ಬಿಡುವಂತೆ ಒಂದೇ ಸಮನೆ ಬೇಡುತ್ತಿದ್ದ ಮುದುಕಿಯನ್ನು ಕಂಡು ಕನಿಕರವೆನಿಸಿತು. ಅಲ್ಲೇ ವಾಕ್ ಮಾಡುತ್ತಿದ್ದವಳು 'ಪಾಪ, ಬಿಡಪ್ಪ ಅಜ್ಜಿ ಗೋಳಾಡ್ತಿದೆ ' ಎಂದೆ. 'ನಿಮಗೇನು ಏಳ್ತೀರಾ , ದೊಡ್ಡ ಮೇಟ್ರನ್ ಬಂದ್ರೆ ನಮಗೆ ಐತೆ ಪೂಜೆ, ಏ ಮುದುಕಿ ನಾಳೆಯಿಂದ ಊಟ ತರೋದು ಲೇಟ್ ಆದ್ರೆ ಬರ್ಲೇಬೇಡ ' ಬೈಕೊಂಡೇ ಒಳಗೆ ಬಿಟ್ಟು ಬಾಗಿಲು ಎಳ್ಕೊಂಡ. ಅಜ್ಜಿ ನನ್ನೆಡೆಗೆ ತಿರುಗಿ ಕೃತಜ್ಞತಾಪೂರ್ವಕವಾಗಿ ನಕ್ಕು ಮುಂದೆ ಹೋಯಿತು.
Add Comment
Please, Sign In to add comment